ನವಕುಸುಮಗಳು ಅರಳಿ ನಳನಳಿಸುವ ಸುಂದರವನವಿದು. ಬನ್ನಿ, ನಿಮ್ಮ ಮನ ಮುದಗೊಳಿಸಿಕೊಳ್ಳಿ, ನಿಮಗೆ ಸುಸ್ವಾಗತ!
ಪುಟ್ಟ ಪುಟ್ಟ
ಚಿಟ್ಟೆ ಬಂತು
ಬಟ್ಟೆ ರಂಗು ರಂಗಲಿ
ಹೊಟ್ಟೆಮೇಲೆ
ಪಟ್ಟೆ ಪಟ್ಟೆ
ಪುಟ್ಟ ಕಣ್ಣು ನಾಲಿಗೆ
ಬೆಕ್ಕು ಬಂತು
ನೆಕ್ಕಿ ಕುಡಿದು
ಸೊಕ್ಕಿನಿಂದ ಹಾಲನು
ನಕ್ಕು ನಿಂತು
ಚಿಕ್ಕ ಹಲ್ಲು
ಬೆಕ್ಕು ತಾನು ತೋರಿತು
ನಾಯಿ ಮರಿಯು
ಬಾಯಿ ತೆರೆದು
ಜೀಯ ತಿಂಡಿಯೆಂದಿತು
ತಾಯಿ ನಾಯಿ
ಬಾಯಿಯಲ್ಲಿ
ಕಾಯಿ ತಂದು ಕೊಟ್ಟಿತು
Post a Comment
No comments:
Post a Comment